• ಮುಖಾಮುಖಿ - ಯಾವುದೋ ಬಡಹುಡುಗಿಯ ಸಾವಿನಲ್ಲಿ ತನ್ನ ಪಾತ್ರವನ್ನು ಅಲ್ಲಗಳೆಯುತ್ತಾ ಒಂದು ಕುಟುಂಬ ತನ್ನ ಅಂತರಂಗವನ್ನು ತೆರೆದಿಡುವ ಕೌತುಕಮಯ ಚಿತ್ರ.

  • ಮುಖಾಮುಖಿ ಚಿತ್ರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯೆಂದೇ ಪರಿಚಿತವಾಗಿರುವ ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನಡೆಸಲಾಯಿತು. ಚಿತ್ರದ ಕತೆ ಬೆಳವಣಿಗೆ ಮತ್ತು ಅಭಿವೃದ್ಧಿಗಳ ಬಗ್ಗೆಗಿನ ನಗರಗಳ ಇಂದಿನ ಉನ್ಮತ್ತ ಮನೋಭಾವದ ಹಂದರದಲ್ಲಿ ಬಿಚ್ಚಿಕೊಳ್ಳುತ್ತದೆ.

  • ಈ ಚಿತ್ರವನ್ನು ೧೬ಮಿಮಿನಲ್ಲಿ ಚಿತ್ರೀಕರಿಸಿ ನಂತರ ೩೫ಮಿಮಿಗೆ ಹಿಗ್ಗಿಸಲಾಯಿತು. ಇಡೀ ಚಿತ್ರಕ್ಕೆ ಸಂಭಾಷಣೆಯನ್ನು ಸ್ಥಳದಲ್ಲೇ ಚಿತ್ರೀಕರಿಸಲಾಯಿತು. ಕರ್ನಾಟಕದ ಚಿತ್ರೋದ್ಯಮದ ಮೂವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿ ಚಿತ್ರದಲ್ಲಿ ಇದನ್ನು ಸಾಧಿಸಲಾಗಿದೆ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತಿದೆ.

  • ಇತ್ತೀಚೆಗೆ ೨೦೦೬ನೇ ಸಾಲಿನ ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ಕೂಡ ಲಭಿಸಿದೆ.